ವಿರಾಜಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಮಳಿಗೆ, ಎಸ್ ಜೋಯ್ಸ್ ಟವರ್ಸ್ ನ್ನು  ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ  ಅವರು ಉದ್ಘಾಟಿಸಿದರು. ಬಳಿಕ ಶುಭ ಕೋರಿದ ಶಾಸಕರು, ವೇಗವಾಗಿ ಬೆಳೆಯುತ್ತಿರುವ ವಿರಾಜಪೇಟೆ ನಗರದ ಜನತೆಯ ಅಗತ್ಯಗಳನ್ನು ಪೂರೈಸಲು ಒಂದೇ ಸಂಕೀರ್ಣದಲ್ಲಿ ಎಲ್ಲಾ ಸವಲತ್ತು ದೊರೆಯುವುದು ತುಂಬಾ ಅನುಕೂಲವಾಗುತ್ತದೆ. ಅಂತಹ ವಾತಾವರಣ ನಿರ್ಮಿಸುವುದು ಸಹ ಒಂದು ಉತ್ತಮ ಚಿಂತನೆಯಾಗಿದೆ. ಈ ವಾಣಿಜ್ಯ ಸಂಕೀರ್ಣವು ಯಶಸ್ಸನ್ನು ಕಾಣುತ್ತಾ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಇದೇ ಸಂದರ್ಭದಲ್ಲಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಜೋಯ್ಸ್ ಟವರ್ಸ್ ನ ಮಾಲೀಕರು, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ,ಪುರಸಭೆ ಸಾಯಿ ಸಮಿತಿ ಅಧ್ಯಕ್ಷರಾದ ಅಬುದುಲ್ ಜಲಿಲ್,ಪುರಸಭೆ ಸದಸ್ಯರಾದ ರಾಜೇಶ್, ಮತೀನ್, ಪೃಥ್ವಿನಾಥ್, ರಜಿನಿಕಾಂತ್, ಕಾಂಗ್ರೆಸ್ ಮುಖಂಡರಾದ ಜೋಕಿಮ್, ರಾಜೇಶ್ ನಯಾರ್, ಕುಂದಚೀರ ಮಂಜು ದೇವಯ್ಯ, ಎ ವಿ ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version