ಸೋಮವಾರಪೇಟೆ ತಾಲ್ಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತದ ಬಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸೋಮವಾರಪೇಟೆ ಪಟ್ಟಣ ಸಮೀಪದ ಹನಗೋಡು ಗ್ರಾಮದ ಚಿದಾನಂದ್ (27)ಎಂಬಾತ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾನೆ ಎನ್ನಲಾಗಿದೆ, ಪೂರಕವಾಗಿ ಚಿದಾನಂದ್ ಜಲಪಾತದ ಕಡೆಗೆ ತೆರಳುತ್ತಿದ್ದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾ ದಲ್ಲಿ ಸೆರೆ ಯಾಗಿದೆ. ಚಿದಾನಂದ ಬೀದಳ್ಳಿ ಹೈಡ್ರೋ ಪ್ರಾಜೆಕ್ಟ್ ನಲ್ಲಿ ಉದ್ಯೋಗಿ ಎಂದು ತಿಳಿದು ಬಂದಿದ್ದು, ಸಿಸಿ ಕ್ಯಾಮರಾ ದೃಶ್ಯಗಳು ಅಧರಿಸಿ ಜಲಪಾತದ ಬಳಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Exit mobile version