ಮಡಿಕೇರಿ : ಗಾಂಜ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಐದು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಸಿದ್ದಾಪುರ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದ ಮೇರೆ ಸ್ಥಳಿಯರು ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಇಂಜಿಲಗೆರೆ ನಿವಾಸಿ ರತೀಶ್, ಗುಹ್ಯಗ್ರಾಮದ ಎನ್,ಆರ್ ರಂಜಿತ್ , ಕರಡಿಗೋಡು ಗ್ರಾಮದ ಪಿ,ಎಸ್,ಹರೀಶ್, ಮತ್ತು ಹೆಚ್ ,ಸಿ,ಸುರೇಶ್ ಕುಮಾರ್ ಹಾಗೂ ಅಮ್ಮತ್ತಿ, ಮುಕ್ಕಾಟ್ಟಿಕೊಪ್ಪ ಗ್ರಾಮದ ಜಿ.ಶಿವಕುಮಾರ ಎಂಬವರ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ,ಪಿ.ಎಸ್.ಐ ಶಿವಣ್ಣ, ಸಿಬ್ಬಂದಿಗಳು ಹಾಜರಿದ್ದರು.


