ಕೊಡಗು ಪತ್ರಕತ೯ರ ಸಂಘದಿಂದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿಯೊಂದಿಗೆ ಸಂವಾದ – ಅಭಿನಂದನಾ ಕಾಯ೯ಕ್ರಮ

ಪದಗಳ ತಜು೯ಮೆಗಿಂತ ಭಾವನೆಗಳನ್ನು ಬಿಂಬಿಸುವ ಭಾವಾನುವಾದಕ್ಕೇ ಮಹತ್ವ – ದೀಪಾಭಾಸ್ತಿ.

ಮಡಿಕೇರಿ ಜೂನ್ 8 –  ಪದಗಳ  ತಜು೯ಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ  ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ ಎಂದು ಪ್ರತಿಷ್ಟಿತ ಅಂತರರಾಷ್ಟ್ರೀಯ  ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಪತ್ರಕತ೯ರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ಆಯೋಜಿತ ಪತ್ರಕತೆ೯ ದೀಪಾಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡು ದೀಪಾಭಾಸ್ತಿ ಮಾತನಾಡಿದರು.

ಬಾನುಮುಷ್ತಾಕ್ ಅವರ ಎದೆಯ ಹಣತೆ ಕೖತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲೀಷ್ ನಲ್ಲಿ ಬರೆದ ಹಾಟ್೯ ಲ್ಯಾಂಪ್ ಕೖತಿ ಸಂಬಂಧಿತ ಮಾಹಿತಿ ನೀಡಿದ ದೀಪಾಭಾಸ್ತಿ, ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತಜು೯ಮೆ ಮಾಡಬಾರದು. ಇದರ ಬದಲಿಗೆ ಮೂಲಕೖತಿಯಲ್ಲಿನ ಪದಗಳ ಭಾವವನ್ನು ಅಥೈ೯ಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು. ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಅತ್ಯಂತ ಶ್ರೇಷ್ಟ ಕೖತಿಗಳು ಇನ್ನಾದರೂ ಇಂಗ್ಲೀಷ್ ಗೆ ಅನುವಾದಗೊಂಡು ಜಾಗತಿಕವಾಗಿ ಓದುಗರನ್ನು ತಲುಪಬೇಕಾದ ಅಗತ್ಯವಿದೆ, 1,500 ವಷ೯ಗಳ ಇತಿಹಾಸವಿರುವ ಕನ್ನಡದ ಕೖತಿಗಳು ವಿಶ್ವವ್ಯಾಪಿ  ಕನ್ನಡ ನೆಲದ ಸಾಹಿತ್ಯ ಕಂಪು ಬೀರಬೇಕಾಗಿದೆ ಎಂದೂ ಅವರು ಹೇಳಿದರು.  ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇತರ ಭಾಷೆಗಳ ಶ್ರೇಷ್ಟ ಕೖತಿಗಳು ಕನ್ನಡಕ್ಕೆ ಅನುವಾದವಾಗಬೇಕಾದ ಅಗತ್ಯತೆಯಿದೆ. ಪಕ್ಕದ ಕೇರಳದಲ್ಲಿನ ಮಲಯಾಳದಲ್ಲಿ ಅನುವಾದಕ್ಕೆ ಪ್ರಾಧಾನ್ಯತೆ ಇದೆ ಎಂದೂ ದೀಪಾ ಬಾಸ್ತಿ ಅಭಿಪ್ರಾಯಪಟ್ಟರು.

 

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಹಸಿರ ಸಿರಿ ನಡುವೆ ತನ್ನ ಪಾಡಿಗೆ ತಾನು ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ದೀಪಾ ಅವರ ಶ್ರಮಕ್ಕೆ ಶ್ಲಾಘನೀಯ ಪ್ರತಿಫಲ ಬೂಕರ್ ಪ್ರಶಸ್ತಿ ಮೂಲಕ ದೊರಕಿದೆ.  ಈ ಮೂಲಕ ಕೊಡಗು ಜಿಲ್ಲೆಯೂ ವಿಶ್ವದ ಸಾಹಿತ್ಯಲೋಕದ ಬಾನಂಗಣದಲ್ಲಿ ರಾರಾಜಿಸುವಂತಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ವಂದಿಸಿದ ಕಾಯ೯ಕ್ರಮದಲ್ಲಿ ಕೊಡಗು ಪತ್ರಕತ೯ರ ಸಂಘದ ಪರವಾಗಿ ದೀಪಾಭಾಸ್ತಿಯವರನ್ನು ಸನ್ನಾನಿಸಿ ಗೌರವಿಸಲಾಯಿತು, ಸಂಘದ ಸಲಹೆಗಾರರಾದ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ನಿದೇ೯ಶಕರು, ಸದಸ್ಯರು ಹಾಜರಿದ್ದರು.

Exit mobile version